13th Sudha Mangala and Paduka Samaradhana at Bhadravati from 03rd Nov to 9th Nov 2025. Invitation here
ಶ್ರೀಗುರುಭ್ಯೋ ನಮಃ:
ಜಯಂತೀಕಲ್ಪ
ಶ್ರೀಮದಾಚಾರ್ಯರು ರಚಿಸಿದ ಸರ್ವಮೂಲಗ್ರಂಥ ಗಳಲ್ಲಿ ಜಯಂತೀಕಲ್ಪವೂ ಒಂದು.
ಈ ಗ್ರಂಥವನ್ನು ಜಯಂತೀನಿರ್ಣಯ, ಕೃಷ್ಣಾಷ್ಟಮೀಕಲ್ಪ ಎಂದೂ ಕರೆಯಲಾಗುತ್ತದೆ.
ಕೃಷ್ಣಪರಮಾತ್ಮನ ಅವತಾರದಿನವಾದ ಕೃಷ್ಣಜಯಂತೀ ಅಥವಾ ಕೃಷ್ಣಾಷ್ಟಮಿಯನ್ನು ಹೇಗೆ
ಆಚರಿಸಬೇಕು ಎಂದು ಈ ಗ್ರಂಥದಲ್ಲಿ ತಿಳಿಸಲಾಗಿದೆ.
ಗಾತ್ರದಲ್ಲಿ ಚಿಕ್ಕದಾದರೂ ಅಗಾಧವಾದ ವಿಷಯವನ್ನು ತಿಳಿಸುವ ಅಪರೂಪದ ಕೃತಿ.
ಈ ಗ್ರಂಥವನ್ನು ರಚಿಸುವ ಮೂಲಕ ಆಚಾರ್ಯರು ವೈಷ್ಣವವ್ರತಾಚರಣೆಗಳಿಗೆ ಮಾರ್ಗದರ್ಶನವನ್ನುಮಾಡಿದ್ದಾರೆ.
ಈ ಗ್ರಂಥದ ತಾತ್ಪರ್ಯವ್ಯಾಖ್ಯಾನವನ್ನು ಅನೇಕ ಜನರು ಮಾಡಿದ್ದಾರೆ. ಶಬ್ದತ: ವ್ಯಾಖ್ಯಾನವನ್ನೂ
ಅನೇಕರು ಮಾಡಿರಬಹುದು.ಆದರೆ ಪ್ರಸಿದ್ಧವಾದುವುಗಳು ಎರಡು.
೧) ವಾಗೀಶತೀರ್ಥರ ಶಿಷ್ಯರಾದ ರಾಮಚಂದ್ರ ತೀರ್ಥರು ಮಾಡಿದ ವ್ಯಾಖ್ಯಾನ.
೨) ಸತ್ಯಸಂತುಷ್ಟತೀರ್ಥರ ಶಿಷ್ಯರಾದ ಸತ್ಯಪರಾಯಣತೀರ್ಥರು ರಚಿಸಿದ ವ್ಯಾಖ್ಯಾನ.
ಸತ್ಯಪರಾಯಣತೀರ್ಥರು ರಚಿಸಿದ ವ್ಯಾಖ್ಯಾನವು ಆಚಾರ್ಯರ ಗ್ರಂಥದ ಶಬ್ದಾರ್ಥವನ್ನು ತಿಳಿಯಲು,
ಅರ್ಥಗಾಂಭೀರ್ಯವನ್ನು ತಿಳಿಯಲು, ಸಾಂಪ್ರದಾಯಿಕವಾದ ವಿಷಯವನ್ನು ತಿಳಿಯಲು ಅತ್ಯಂತ ಸಹಕಾರಿಯಾಗಿದೆ.
ಇಂತಹ ಜಯಂತಿ ಕಲ್ಪದ ಅಧ್ಯಯನವನ್ನು ಮಾಡಿ ಅದರಲ್ಲಿ ಹೇಳಿದಂತೆಯೇ ಕೃಷ್ಣಜನ್ಮಾಷ್ಟಮಿ
ಆಚರಣೆಯನ್ನು ಮಾಡುವ ಪ್ರಯತ್ನವನ್ನು ಮಾಡೋಣ.
ಶ್ರೀಕೃಷ್ಣಾರ್ಪಣಮಸ್ತು