Download the consolidated UM app here

Articles/ ಸರ್ವಮೂಲದರ್ಶಿನೀ-೧೦

2 years ago

ಶ್ರೀಗುರುಭ್ಯೋ ನಮಃ:

ಯತಿಪ್ರಣವಕಲ್ಪ

ಶ್ರೀಮದಾಚಾರ್ಯರು ರಚಿಸಿದ ಸರ್ವಮೂಲಗ್ರಂಥ ಗಳಲ್ಲಿ ಯತಿಪ್ರಣವಕಲ್ಪವೂ ಒಂದು.
ಈ ಗ್ರಂಥವನ್ನು ಪ್ರಣವಕಲ್ಪ ಎಂದೂ ಕರೆಯಲಾಗುತ್ತದೆ.

“ಸನ್ಯಾಸವನ್ನು ಹೇಗೆ ಸ್ವೀಕರಿಸಬೇಕು, ಸನ್ಯಾಸಿಗಳ ಹೇಗಿರಬೇಕು, ಮಂತ್ರಗಳನ್ನು, ವಿಶೇಷವಾಗಿ
ಪ್ರಣವಮಂತ್ರವನ್ನು ಹೇಗೆ ಜಪಿಸಬೇಕು, ಸನ್ಯಾಸಿಗಳ ಪರಮಮುಖ್ಯಕರ್ತವ್ಯವೇನು” ಇತ್ಯಾದಿವಿಷಯಗಳನ್ನು
ಈ ಗ್ರಂಥದಲ್ಲಿ ತಿಳಿಸಲಾಗಿದೆ.
ಗಾತ್ರದಲ್ಲಿ ಚಿಕ್ಕದಾದರೂ ಅಗಾಧವಾದ ವಿಷಯವನ್ನು ತಿಳಿಸುವ ಅಪರೂಪದ ಕೃತಿ.
ಈ ಗ್ರಂಥವನ್ನು ರಚಿಸುವ ಮೂಲಕ ಆಚಾರ್ಯರು ವೈಷ್ಣವಸನ್ಯಾಸಿಗಳಿಗೆ ಮಾರ್ಗದರ್ಶನವನ್ನು ಮಾಡಿದ್ದಾರೆ.
ಈ ಗ್ರಂಥದ ತಾತ್ಪರ್ಯವ್ಯಾಖ್ಯಾನವನ್ನು ಅನೇಕ ಜನರು ಮಾಡಿದ್ದಾರೆ.
ಶಬ್ದತ: ವ್ಯಾಖ್ಯಾನವನ್ನೂ ಅನೇಕರು ಮಾಡಿರಬಹುದು. ಆದರೆ ಉಪಲಬ್ಧವಾದದ್ದು ಎರಡು.

೧) ಶ್ರೀರಘೂತ್ತಮಸ್ವಾಮಿಗಳ ಶಿಷ್ಯರಾದ, ನ್ಯಾಯಾಮೃತಕ್ಕೆ ತರಂಗಿಣೀ ಎಂಬ
ಪರಮಾದ್ಭುತವ್ಯಾಖ್ಯಾನವನ್ನು ಬರೆದ ತರಂಗಿಣೀ ವ್ಯಾಸರಾಮಾಚಾರ್ಯರು ಮಾಡಿದ ವ್ಯಾಖ್ಯಾನ.
೨) ಶ್ರೀವ್ಯಾಸತತ್ವಜ್ಞತೀರ್ಥರು ರಚಿಸಿರುವ ವ್ಯಾಖ್ಯಾನ. (ಇದು ಇನ್ನೂ ಪ್ರಕಟವಾಗಿಲ್ಲ)

ಇಂತಹ ಯತಿಪ್ರಣವಕಲ್ಪದ ಅಧ್ಯಯನವನ್ನು ಮಾಡಿ ಅಲ್ಲಿ ಹೇಳಿದಂತೆ ಸ್ವಾಶ್ರಮೋಚಿತವಾದ
ಆಚರಣೆಯನ್ನು ಮಾಡುವ ಪ್ರಯತ್ನವನ್ನು ಮಾಡೋಣ.

ಶ್ರೀಕೃಷ್ಣಾರ್ಪಣಮಸ್ತು

Sri Uttaradi Math Apps

Sri Uttaradi Math

Sri Uttaradi Math

VVS Matrimony

VVS Matrimony

UM Stotra

UM Stotra

Satyatma Vani

Satyatma Vani

Sandhyavandanam and Stotra (Web)

Sandhyavandanam and Stotra (Web)