ಸರ್ವಮೂಲದರ್ಶಿನೀ-೧

ಶ್ರೀಗುರುಭ್ಯೋ ನಮ:

ಲೇಖನದ ವಿಷಯಾನುಕ್ರಮಣಿಕೆ

೧) ಮಾಧ್ವರ ಅವಶ್ಯಕರ್ತವ್ಯವೇನು?

೨) ‘ಸರ್ವಮೂಲಗ್ರಂಥಗಳು’ ಅಂದರೇನು?

೩) “ಸರ್ವಮೂಲ”ಶಬ್ದಕ್ಕೆ ಮೂಲವೇನು?

ಮಾಧ್ವರ ಅವಶ್ಯಕರ್ತವ್ಯ

ಮನುಷ್ಯನಾದವನಿಗೆ ವಿವೇಕ ಮಾನವೀಯತೆ ಎಷ್ಟು ಮುಖ್ಯವೋ, ಬ್ರಾಹ್ಮಣನಾದವನಿಗೆ ಸಂಧ್ಯಾ-ವಂದನಾದಿಸತ್ಕರ್ಮಗಳು ವೇದಾಧ್ಯಯನವು ಎಷ್ಟು ಅನಿವಾರ್ಯವೋ, ಸುಮಂಗಲೀಸ್ತ್ರೀಯರಿಗೆ ಅರಿಶಿನ-ಕುಂಕುಮ ಮೊದಲಾದ ಸೌಭಾಗ್ಯದ್ರವ್ಯಗಳು ಎಷ್ಟು ಅನಿವಾರ್ಯವೋ, ಅದೇ ರೀತಿ ಮಾಧ್ವನಾಗಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಸರ್ವಮೂಲಗಳ ಜ್ಞಾನ, ಅದರಲ್ಲಿ ಹೇಳಿರುವಂತೆ ಅನುಷ್ಠಾನವು ಅತ್ಯಂತ ಅನಿವಾರ್ಯವಾದುದ್ದು. 

ಸರ್ವಮೂಲಗ್ರಂಥಗಳ ಬಗ್ಗೆ ತಿಳಿಯದ ಜೀವನ ವ್ಯರ್ಥವೇ ಸರಿ. ಹಾಗಾಗಿ ಸರ್ವಮೂಲಗ್ರಂಥಗಳ ಪರಿಚಯವನ್ನು ಯಥಾಶಕ್ತಿ ಮಾಡಿಕೊಳ್ಳೋಣ.

‘ಸರ್ವಮೂಲಗ್ರಂಥಗಳು’ ಅಂದರೇನು?

ಸಾಮಾನ್ಯವಾಗಿ ಎಲ್ಲರೂ “ಸರ್ವಮೂಲಗ್ರಂಥ” ಎಂಬ ಶಬ್ದವನ್ನು ಕೇಳಿರುತ್ತೇವೆ. ಆದರೆ ಅದರ ಅರ್ಥವೇನು? ಎನ್ನುವುದು ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಅದನ್ನು ಇಲ್ಲಿ ತಿಳಿದುಕೊಳ್ಳೋಣ. 
ನಮ್ಮೆಲ್ಲರ ಗುರುಗಳಾದ, ಪರಮಾತ್ಮನಿಗೆ ಅತ್ಯಂತ ಪ್ರೀತಿಪಾತ್ರರಾದ, ಶ್ರೀಮುಖ್ಯಪ್ರಾಣದೇವರ ಮೂರನೆ ಅವತಾರರಾದ ಶ್ರೀಮದಾಚಾರ್ಯರು ರಚಿಸಿರುವ ಗ್ರಂಥಗಳನ್ನು “ಸರ್ವಮೂಲಗ್ರಂಥಗಳು” ಎಂದು ಜ್ಞಾನಿಗಳು ಕರೆಯುತ್ತಾರೆ. 
ಈ ಗ್ರಂಥಗಳೇ ಸಾಧಕನ ಸಾಧನೆಗೆ ಸೋಪಾನ- ವಾಗಿವೆ. ಜ್ಞಾನಪಿಪಾಸುಗಳಿಗೆ ಅಸದೃಶರಸದೌತಣ. ಚಿಂತಕರಿಗೆ ಉತ್ತಮವಾದ. ಇವೇ ಜೀವನದ ತ್ರಾಣ.

“ಸರ್ವಮೂಲ”ಶಬ್ದಕ್ಕೆ ಮೂಲವೇನು?

ಶ್ರೀಮದಾಚಾರ್ಯರು ಅವರ ಸಾಕ್ಷಾಚ್ಛಿಷ್ಯರು ತಮ್ಮ ಗ್ರಂಥಗಳಲ್ಲಿ ‘ಸರ್ವಮೂಲ’ ಎಂಬ ಶಬ್ದವನ್ನು ಹೇಳಿಲ್ಲ ಅತ್ಯಂತಪ್ರಾಚೀನಗ್ರಂಥಗಳಲ್ಲಿ, ತಾಡವಾಲೆಗಳಲ್ಲಿ ಈ ಹೆಸರು ನಮಗೆ ದೊರೆಯುವುದಿಲ್ಲ. ಆದರೂ ೨೦೦/-೩೦೦ ವರ್ಷಗಳ ಹಿಂದಿನ ತಾಡವಾಲೆಗಳಲ್ಲಿ ಈ ಹೆಸರಿನ ಉಲ್ಲೇಖವು ಸಿಗುತ್ತದೆ’ ಎಂದು ಕೆಲವು ಸಂಶೋಧಕರು ತಿಳಿಸಿದ್ದಾರೆ.

ಮುಖ್ಯವಾಗಿ ಗ್ರಂಥಗಳಲ್ಲಿ, ತಾಡವಾಲೆಗಳಲ್ಲಿ ಈ ಹೆಸರಿನ ಉಲ್ಲೇಖವು ಇಲ್ಲದಿದ್ದರೂ ಪರಂಪರಾಗತ-ವಾಗಿ ಸಾರ್ವತ್ರಿಕವಾಗಿ ಈ ಹೆಸರು ರೂಢಿಯಲ್ಲಿ ಬಂದಿದೆ. ಜೊತೆಗೆ ಯಾವ ಬಾಧಕವೂ ಇಲ್ಲ. ಹಾಗಾಗಿ ಈ ಹೆಸರು ಆಚಾರ್ಯರಿಗೆ ಸಮ್ಮತವಾದದ್ದು. ಈ ನಾಮವು ಆಚಾರ್ಯರಿಂದಲೆ ಪ್ರವೃತ್ತವಾಗಿದೆ ಎಂದು  ಸಿದ್ಧವಾಗುತ್ತದೆ. ಕೆಲವು ವಿಷಯಗಳು ಹಾಗೆಯೆ ಲಿಖಿ- ತವಾಗಿ ದಾಖಲಾಗದೆ ಒಬ್ಬರಿಂದ ಒಬ್ಬರಿಗೆ ವಚನ-ದಿಂದಲೇ ಪ್ರಸಿದ್ಧವಾಗಿರುತ್ತವೆ. ಇದನ್ನೆ ಐತಿಹ್ಯ-ವೆನ್ನುವರು. ಅನಿರ್ದಿಷ್ಟಪ್ರವಕ್ತೃಕಂ ಪ್ರವಾದಪಾರಂ-ಪರ್ಯಮೈತಿಹ್ಯಂ

ಸಂಕರ್ಷಣಒಡೆಯರ, ಏರಿ ಬಾಳಾಚಾರ್ಯರೆ ಮುಂತಾದವರ ಗುರುಗಳಾದ ಉತ್ತರಾದಿಮಠದ ಶ್ರೀಸತ್ಯಪರಾಯಣತೀರ್ಥರು ‘ಬಿಲ್ವಮಂಗಲ: ಸಾಧು:' ಎಂಬ ಗ್ರಂಥದ ತಮ್ಮ ವ್ಯಾಖ್ಯಾನದಲ್ಲಿ ಸರ್ವಮೂಲ ಪದದ ಬಳಕೆಯನ್ನು ಮಾಡಿದ್ದಾರೆ.

बिल्वमङ्गलः साधुः इति सर्वज्ञोक्तं वाक्यं सर्वमूलान्तर्भूतमिति सम्प्रदायविदः।


ಪ್ರಾಯ: ಗ್ರಂಥಗಳಲ್ಲಿ “ಸರ್ವಮೂಲ” ಎಂಬ ನಾಮನಿರ್ದೇಶವು ಇದೆ ಮೊದಲು ಎಂದೆನಿಸುತ್ತದೆ.

ಶ್ರೀಕೃಷ್ಣಾರ್ಪಣಮಸ್ತು

Uttaradimath App's

Sri Uttaradi Math

VVS Matrimony

UM Stotra

UM Panchanga

Sandhyavandanam

Pavamana