Download the consolidated UM app here
ಪರಮಪೂಜ್ಯ ಶ್ರೀ ಶ್ರೀ1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆದೇಶ ಹಾಗೂ ಅವರ ಅನುಗ್ರಹದಿಂದ ಬೆಂಗಳೂರಿನ ಸಹಕಾರ ನಗರದಲ್ಲಿದ್ದ ಶ್ರೀವೇಣುಗೋಪಾಲದೇವರ ಹಾಗೂ ಶ್ರೀರಾಘವೇಂದ್ರಸ್ವಾಮಿಗಳ ಮೃತ್ತಿಕಾವೃಂದಾವನದ ಸನ್ನಿಧಾನವಿರುವ ಶ್ರೀಉತ್ತರಾದಿಮಠದ ಭವನವನ್ನು ಪುನರ್ನಿರ್ಮಾಣ ಮಾಡಲಾಗುತ್ತಿದೆ.
ಕಳೆದ 3 ದಶಕಗಳಿಂದ ಸುತ್ತಮುತ್ತಲ ಭಕ್ತರಿಗೆ ಶ್ರದ್ಧಾಕೇಂದ್ರವಾಗಿದ್ದ ಈ ಮಠವು ಈಗ ಭಕ್ತರ ಅಪೇಕ್ಷೆಯಂತೆ ಹಾಗೂ ಎಲ್ಲ ಭಕ್ತರ ಸಹಕಾರದೊಂದಿಗೆ ನೂತನವಾಗಿ ಇನ್ನೂ ಹೆಚ್ಚು ಸೌಲಭ್ಯಗಳೊಂದಿಗೆ ನಿರ್ಮಾಣವಾಗುತ್ತಿದೆ. ಅಂದಾಜು 4 ಕೋಟಿ ರೂ ಯೋಜನೆಯ ಈ ಕಾರ್ಯಕ್ಕೆ ಎಲ್ಲ ಭಕ್ತರೂ ವಿಶೇಷವಾಗಿ ತನು ಮನ ಧನಗಳಿಂದ ಸೇವೆಯನ್ನು ಸಲ್ಲಿಸಿ ಗುರುರಾಜರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮನವಿ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ – ಶ್ರೀ ಹೆಚ್ ಎನ್ ಮಾಹುಲಿ – 94480 54211