ಶ್ರೀಗುರುಭ್ಯೋ ನಮಃ
ದ್ವಾದಶಸ್ತೋತ್ರದ ಹಿನ್ನಲೆ
ದ್ವಾದಶಸ್ತೋತ್ರದ ಹಿನ್ನೆಲೆಯನ್ನು ಪಲಿಮಾರುಮಠ-ದ ಶ್ರೀರಘುವರ್ಯತೀರ್ಥರು
ತಮ್ಮ ಗ್ರಂಥದಲ್ಲಿ ‘ಪ್ರಾಚೀನಾಚಾರ್ಯರು ಹೇಳುತ್ತಿದ್ದ ಚರಿತ್ರೆ’ ಎಂದು ಹೇಳಿ, ಈ ಕಥೆಯನ್ನು ಹೇಳಿದ್ದಾರೆ
“ಶ್ರೀಮದಾಚಾ-ರ್ಯರು ದ್ವಾರಕೆಯಿಂದ ಬಂದ ಕೃಷ್ಣಪರಮಾತ್ಮನ ವಿಗ್ರಹವನ್ನು ತರುವ
ಸಂದರ್ಭದಲ್ಲಿ ದ್ವಾದಶಸ್ತ್ರೋತ್ರ-ಗಳನ್ನು ರಚಿಸಿದರು” ಎಂದು ಶ್ರೀವಿಶ್ವಪತಿತೀರ್ಥರು ಪ್ರಾಚೀನರಿಗೆ
ಸಮ್ಮತವಾದ ಇದೇ ಚರಿತ್ರೆಯನ್ನು ಹೇಳುತ್ತಾ ಸೂಕ್ಷ್ಮವಿಷಯ-ವೊಂದನ್ನು ಹೇಳಿದ್ದಾರೆ.
“ಆಚಾರ್ಯರು ಉಡುಪಿ-ಯಿಂದ ಪಶ್ಚಿಮಸಮುದ್ರಕ್ಕೆ(ಅಂದರೆ ಮಲ್ಪೆಗೆ) ಕೃಷ್ಣನ ವಿಗ್ರಹವನ್ನು ತರಲು
ಹೋಗುವಾಗ ‘ವಂದೇ ವಂದ್ಯಂ..’ ಎಂದು ಆರಂಭಿಸಿ 5 ಸ್ತೋತ್ರಗಳನ್ನು ರಚಿಸಿರುತ್ತಾರೆ.
ಸಮುದ್ರತೀರದಲ್ಲಿ ಕೃಷ್ಣನ ವಿಗ್ರಹವು ಸಿಕ್ಕಾಗ ‘ದೇವಕಿನಂದನ ನಂದಕುಮಾರ ಎಂದಾ-ರಂಭಿಸಿ
ಆನಂದಸುಪೂರ್ಣ’ ಎಂಬಲ್ಲಿಯವರೆಗಿನ ಎರಡುವರೆ ಶ್ಲೋಕಗಳಿಂದ ಕೃಷ್ಣದೇವರನ್ನು ಸ್ತುತಿಸುತ್ತಾರೆ” ಎಂದು.
ಸಾಂಪ್ರದಾಯಿಕವಾಗಿಯೂ ಇದೇ ಚರಿತ್ರೆಯನ್ನೇ ಎಲ್ಲರೂ ಹೇಳುತ್ತಾರೆ. ಹಾಗಾಗಿ ಈ ವಿಷಯದಲ್ಲಿ
ಯಾವುದೇ ವಿವಾದಕ್ಕೆ ಅವಕಾಶವಿಲ್ಲ.
ಈ ವಿಷಯಗಳಿಗೆ ಆಧಾರ
೧) अत्रैवं पूर्वाचार्यप्रवादः .... ‘तत्र मग्नां
समादाय प्रतिमां द्वादश स्तुतीः। कुर्वंन्नानीय
तां रूप्य आस्थापयदनल्पधीः’ ।
(ಹೃಷೀಕೇಶತೀರ್ಥರ ಪರಂಪರೆಯಲ್ಲಿ ಬಂದ, ಹೃಷೀಕೇಶತೀರ್ಥರದ್ದು ಎಂದು ಪ್ರಸಿದ್ಧವಾದ
ತಾಡವಾಲೆಯನ್ನು ನೋಡಿದ, ಪಲಿಮಾರುಮಠದ ರಘುವರ್ಯತೀರ್ಥರ ಅಣುಮಧ್ವ-ವಿಜಯವ್ಯಾಖ್ಯಾನಸೌರಭಪ್ರಕಾಶಿಕಾ)
೨) (देवकिनन्दन इत्यादि) “एनां कार्ष्णीं कथां
पठतैवाचार्येण रूप्यपीठपुराधिवासः श्रीकृष्णः
समुद्रजठरादानीतः” इत्याभणकमा-भणन्ति
सम्प्रदायविदः। अत एव अस्मिन् स्तोत्रे
‘देवकिनन्दननन्दकुमार’ इत्यारभ्य ‘आनन्द-सुपूर्ण’ इत्यन्तं प्रथमत एव मूलकोशेषु पठ्यते।
तत्र च इत्थमाभणकं वर्णयन्ति ‘रूप्यपीठ-पुरात् श्रीकृष्णानयनार्थं पश्चिमसमुद्रं प्रति
गमनसमये वन्दे वन्द्यम् इत्यादिना भगवन्तं स्तुवन्नेव गतः श्रीमदानन्दतीर्थमुनिः
समुद्रतीरं गतः सन् द्वारकातः समागतं श्रीकृष्णं दृष्ट्वा समनन्तरमेव
‘देवकिनन्दननन्दकुमार इत्या-दिना आनन्दसुपूर्ण इत्यन्तेन’ श्रीकृष्णं स्तुत्वा
अनन्तरञ्च मत्स्यकरूपेत्यादिना दशावतारा-त्मकतया च तमेव स्तुतवान्’ इति। अत एव
‘राघव राघव’ ‘पाण्डवबन्धो’ ‘दैत्यविमोहक’ इत्यादिरूपेण दशावतार क्रमेण कृष्णस्तुतिः
पृथक् च मूलग्रन्थेषु पठ्यते।
(ಪೇಜಾವರಮಠದ ವಿಶ್ವಪತಿತೀರ್ಥರ ದ್ವಾದಶಸ್ತೋತ್ರವ್ಯಾಖ್ಯಾನ)
೩) ಪಾಠ-ಪ್ರವಚನಪರಂಪರೆಯಿಂದಲೂ ಇದೇ ವಿಷಯವು ಸಿದ್ಧವಾಗುತ್ತದೆ.
ಸರ್ವಾಭಿಮತಸ್ಯ ಪ್ರಮಾಣಂ ವಿನಾ ನಿಷೇದ್ಧುಮಶಕ್ಯತ್ವಾತ್.
ದ್ವಾದಶಸ್ತೋತ್ರದ ವಿನಿಯೋಗ ಮತ್ತು ಸಾಮರ್ಥ್ಯ
‘ಟೀಕಾಕೃತ್ಪಾದರು ವೃಷಭರೂಪದಲ್ಲಿ ಆಚಾರ್ಯರ ಬಳಿ ಇದ್ದಾಗ ಉಂಟಾದ ವಿಷದ
ಬಾಧೆಯನ್ನು ಪರಿಹರಿಸಲು ಆಚಾರ್ಯರು ಇದೇ ದ್ವಾದಶ-ಸ್ತೋತ್ರವನ್ನು ಉಪಯೋಗಿಸಿಕೊಂಡರು’
ಎಂದು ಚರಿತ್ರೆಯಲ್ಲಿ ಕೇಳುತ್ತೇವೆ.
..प्रवचनसमये द्वादशस्तोत्रपाठम्। दृष्ट्वा..
(ಅಣುಜಯತೀರ್ಥವಿಜಯ)
यतिराट् ‘द्व्यधिकां दशस्तुतिं’ पुरतोऽन्तेवसतां..। ....स्तोत्रद्वादशकं..
(ಬೃಹಜ್ಜಯತೀರ್ಥವಿಜಯ)
(ಇದು ಟೀಕಾಕೃತ್ಪಾದರ ಸಾಕ್ಷಾಚ್ಛಿಷ್ಯರಾದ, ಮಠಾ-ತೀತರಾಗಿ ಸಕಲಮಾಧ್ವಜ್ಞಾನಿಗಳಿಂದ ಪೂಜ್ಯರಾದ
ವ್ಯಾಸತೀರ್ಥರು ರಚಿಸಿದ ಜಯತೀರ್ಥವಿಜಯಲ್ಲಿದೆ.)
ಆದ್ದರಿಂದಲೇ ಸಕಲಮಾಧ್ವಸಂಪ್ರದಾಯಗಳಲ್ಲಿ ದ್ವಾದಶಸ್ತೋತ್ರವನ್ನು ನೈವೇದ್ಯಕಾಲದಲ್ಲಿ ಪಠಿಸುವ ಪದ್ಧತಿ ಬಂದಿದೆ.
ಈ ಚರಿತ್ರೆಯನ್ನು ಒಪ್ಪದಿದ್ದರೆ ನೈವೇದ್ಯಕಾಲದಲ್ಲಿ ದ್ವಾದಶಸ್ತೋತ್ರವನ್ನು ಪಠಿಸುವ
ಪದ್ಧತಿಗೆ ಪ್ರಮಾಣವೂ ಇಲ್ಲ, ಪ್ರಯೋಜನವೂ ಇಲ್ಲವಾದ್ದರಿಂದ ಅರ್ಥವೇ ಇಲ್ಲ ಎಂದಾಗುತ್ತದೆ.
ಈ ವಿಷಪರಿಹಾರಕತ್ವವು ಸ್ತೋತ್ರದ ಕ್ರಮದಿಂದಲೇ ಸೂಚಿತವಾಗುತ್ತದೆ.
ಅಮೃತಬೀಜವಾದ ವಂ ಎಂಬ ಅಕ್ಷರದಿಂದ ಆರಂಭವಾಗುವ ಗ್ರಂಥವು ದ ಎಂಬ ಅಕ್ಷರದಿಂದ
ಸಮಾಪ್ತವಾಗುತ್ತದೆ.
ವಂದೇ ವಂದ್ಯಂ..ಪರಾನಂದವರದ. ಎರಡನ್ನು ಸೇರಿಸಿದರೆ (ವಂ
ದದಾತಿ ಇತಿ) ವಂದ ಎಂದಾಗುತ್ತದೆ. ಗೀತೆಯ ಧರ್ಮ ಇದ್ದಂತೆ. (ಗಮನಿಸಿ ಬೇರೆ ಯಾವುದೇ
ಸ್ತೋತ್ರಗಳ ಆದ್ಯಂತ ಅಕ್ಷರಗಳನ್ನು ಯಾವುದೇ ಕ್ರಮದಲ್ಲಿ ಸೇರಿಸಿದರೂ ಈ ವಿಶೇಷವು
ಸಿಗುವುದಿಲ್ಲ.)
ಅಮೃತಬೀಜಪ್ರತಿಪಾದ್ಯನಾಗಿ ವಿಷವನ್ನು ಪರಿಹರಿಸಿ ಅಮೃತವನ್ನು, ಮೋಕ್ಷವನ್ನು ಕೊಡುವ ರೂಪ ವಾಸುದೇವರೂಪ.
ವಿಶೇಷವಾಗಿ ವಾಸುದೇವ-ರೂಪವನ್ನು ಈ ಗ್ರಂಥದಲ್ಲಿ ಆಚಾರ್ಯರು ಶ್ರುತಿ-ಲಿಂಗಗಳಿಂದ ಸ್ತುತಿಸಿದ್ದಾರೆ.
ವಾಸುದೇವಂ ನಿರಂಜನಂ, ವಾಸುದೇವಾಯ ತೇ ನಮ:,
ವಾಸುದೇವ ಅಪರಿಮೇಯ,
ಪ್ರೀಣಯಾಮೋ ವಾಸುದೇವಂ,
ಆನಂದಸ್ಯ ಪದಂ,
ಆನಂದತೀರ್ಥಪರಾನಂದವರದ.
ಇಲ್ಲಿ ವಾಸುದೇವ ಎಂದರೆ ಮೋಕ್ಷಪ್ರದಾವಾದ ವಾಸುದೇವರೂಪವೂ ಆಗುತ್ತದೆ.
ವಸುದೇವನ ಮಗನಾಗಿ ಅವತರಿಸಿದ ಕೃಷ್ಣರೂಪವೂ ಆಗುತ್ತದೆ.
ಸಂಖ್ಯೆಯಿಂದಲೂ ಗಮನಿಸಿ:- ವಾಸುದೇವನ ಮಂತ್ರ ಹನ್ನೆರಡು ಅಕ್ಷರದ್ದು. ವಾಸುದೇವನ ಸ್ತೋತ್ರ ಹನ್ನೆರಡು ಅಧ್ಯಾಯಗಳದ್ದು.
ಒಂದು ವಾಸುದೇವದ್ವಾದಶಾಕ್ಷರಮಂತ್ರ. ಮತ್ತೊಂದು ವಾಸುದೇವದ್ವಾದಶಸ್ತೋತ್ರ.
ದ್ವಾದಶಾಕ್ಷರಮಂತ್ರದ ವ್ಯಾಖ್ಯಾನರೂಪದಲ್ಲಿ ಈ ದ್ವಾದಶಸ್ತೋತ್ರವು ಇದ್ದಂತೆ ಇದೆ.
ವಾಸುದೇವರೂಪವನ್ನು ಪುನಃಪುನ: ಸ್ತುತಿಸುವ ಪ್ರೀಣಯಾಮೋ ವಾಸುದೇವಂ ಎಂಬ ಸ್ತೋತ್ರ-
ದಲ್ಲಿಯೂ ೧೨ ಶ್ಲೋಕಗಳನ್ನೇ ಆಚಾರ್ಯರು ಬಳಸುತ್ತಾರೆ. ಹಾಗಾಗಿ ಇಲ್ಲಿ ದ್ವಾದಶ ಸಂಖ್ಯೆಗೆ ಮಹತ್ವವಿದೆ.
ಈ ಗ್ರಂಥಕ್ಕೆ ಅನೇಕ ವ್ಯಾಖ್ಯಾನಗಳಿದ್ದರೂ ಈಗ ಉಪಲಬ್ಧವಾಗಿ ಮುದ್ರಿತವಾಗಿರುವುದು ಎರಡು.
೧) ಶ್ರೀಮದ್ವ್ಯಾಸರಾಜರ ಶಿಷ್ಯರಾದ ಚೆನ್ನಪಟ್ಟಣ
ಆಚಾರ್ಯಕೃತವೆಂದು ಪ್ರಸಿದ್ಧವಾದ ವ್ಯಾಖ್ಯಾನ
೨) ಪೇಜಾವರಮಠದ ಶ್ರೀವಿಶ್ವಪತಿತೀರ್ಥರ
ವ್ಯಾಖ್ಯಾನ.
ಇಂತಹ ಉತ್ತಮವಾದ ಸ್ತೋತ್ರವನ್ನು ಪಠಿಸಿ ಶ್ರೀಮದಾಚಾರ್ಯರ ಮಧ್ವಾಂತಸ್ಥನಾದ
ವಾಸುದೇವ ರೂಪಿಪರಮಾತ್ಮನ ಅನುಗ್ರಹಕ್ಕೆ ಪಾತ್ರರಾಗೋಣ.
ಶ್ರೀಕೃಷ್ಣಾರ್ಪಣಮಸ್ತು