Download the consolidated UM app here

Articles/ ಸರ್ವಮೂಲದರ್ಶಿನೀ-೫

2 years ago

ಶ್ರೀಗುರುಭ್ಯೋ ನಮ:

ಲೇಖನದ ವಿಷಯಾನುಕ್ರಮಣಿಕೆ
ಬಿಲ್ವಮಂಗಲ: ಸಾಧು:
ಗ್ರಂಥದ ಪರಿಚಯ
ಈ ಗ್ರಂಥದ ಹಿನ್ನೆಲೆ
ಈ ಗ್ರಂಥವೂ ಭಗವತ್ಪರ
ಈ ಗ್ರಂಥದ ವ್ಯಾಖ್ಯಾನಗಳು

ಬಿಲ್ವಮಂಗಲ: ಸಾಧು:

“ಬಿಲ್ವಮಂಗಲ: ಸಾಧು:” ಎಂಬ ವಾಕ್ಯವು ಆಚಾರ್ಯರ ಗ್ರಂಥಗಳ ಜೊತೆ ಸೇರುತ್ತದೆ’ ಎಂಬುದು
ಪರಂಪರೆಯಿಂದ ಸಿದ್ಧವಾದ ವಿಷಯ.

 ‘ಬಿಲ್ವಮಂಗಲ: ಸಾಧು:’ ಇತಿ ಸರ್ವಜ್ಞೋಕ್ತಂ ವಾಕ್ಯಂ ಸರ್ವ-
ಮೂಲಾಂತರ್ಭೂತಮ್ ಇತಿ ಸಂಪ್ರದಾಯವಿದ:
(ಶ್ರೀಸತ್ಯಪರಾಯಣತೀರ್ಥರ ವ್ಯಾಖ್ಯಾನ)

ಇದು ‘ಆಚಾರ್ಯರ ಒಂದು ಮಾತು ಎಷ್ಟು ಅದ್ಭುತ; ಎಂದು ತಿಳಿಯಲು ಉತ್ತಮ ನಿದರ್ಶನ.
ಒಂದು ಅಕ್ಷರದ ಮಂತ್ರವಿದ್ದಂತೆ, ಒಂದು ಶ್ಲೋಕದ ಗ್ರಂಥವಿರುವಂತೆ ಒಂದೇ ವಾಕ್ಯದ
ಗ್ರಂಥವಿದು. ಪ್ರಾಯ: ಇಂತಹ ಮತ್ತೊಂದು ಗ್ರಂಥ ಪ್ರಾಯ: ಇರಲಿಕ್ಕಿಲ್ಲ. ಬಹಳ ಅಪೂರ್ವವಾದದ್ದು.

ಈ ಗ್ರಂಥದ ಹಿನ್ನೆಲೆ

ಹತ್ತನೆಯ ಶತಮಾನದಲ್ಲಿ ಲೀಲಾಶುಕ ಎಂಬ ಹೆಸರಿನ ಸ್ಮಾರ್ತ, ಶೈವಪಂಡಿತರಿದ್ದರು. (ಇವರ ಬಗ್ಗೆ
ಹೆಚ್ಚಿನ ವಿವರಗಳು ಗೂಗಲ್ನಲ್ಲಿ ಬೇರೆ ಬೇರೆ ರಾಜ್ಯದ ಪ್ರಾಚೀನ ಪರಂಪರೆಯ ಇತಿಹಾಸಗಳಲ್ಲಿ ಸಿಗುತ್ತವೆ.)
ಅವರನ್ನು ಬಿಲ್ವಮಂಗಲ ಎಂದೂ ಕರೆಯಲಾಗುತ್ತಿತ್ತು. ಶೈವರಾದರೂ ಶ್ರೀಕೃಷ್ಣನ ಭಕ್ತರು. ಈ
ಬಿಲ್ವಮಂಗಲರ ಸಾಧುತ್ವದ ಬಗ್ಗೆ ಶಿಷ್ಯರು ಆಚಾರ್ಯರಲ್ಲಿ ಪ್ರಶ್ನಿಸಿದಾಗ, ಆಚಾರ್ಯರು
‘ಬಿಲ್ವಮಂಗಲ: ಸಾಧು:’ ಎಂದರು. ಅಂದರೆ ‘ಬಿಲ್ವಮಂಗಲನೆಂಬ ಪಂಡಿತರು ವಿಷ್ಣುಭಕ್ತರು
ಸಾತ್ವಿಕರು ಎನ್ನುವುದು’ ಶ್ರೀಮದಾಚಾರ್ಯರ ಆಶಯ. (ಈ ಘಟನೆಯನ್ನು ಭವಿಷ್ಯಚ್ಛಿಷ್ಯರಿಗೂ ತಿಳಿ-
ಸುವುದಕ್ಕೋಸ್ಕರ) ‘ನನ್ನ ಈ ವಾಕ್ಯವನ್ನು ಸರ್ವಮೂಲಗಳಲ್ಲಿ ಸೇರಿಸಿಕೊಳ್ಳಿರಿ’ ಎಂದು ಆಚಾರ್ಯರು
ಹೇಳಿದರು. ಅದಕ್ಕನುಗುಣವಾಗಿ ಈ ವಾಕ್ಯವನ್ನುಸರ್ವಮೂಲಗ್ರಂಥಗಳ ಜೊತೆಗೆ ಸೇರಿಸಿ ಹೇಳುವ
ಪದ್ಧತಿ ಬಂದಿದೆ. ಇದು ಐತಿಹ್ಯ.

ಈ ಗ್ರಂಥವೂ ಭಗವತ್ಪರ

‘ಲೌಕಿಕವಾಗಿ ಈ ವಾಕ್ಯವು ಪ್ರಸಕ್ತವಾಗಿದ್ದರೂ, ಅದ-ರಲ್ಲಿ ಅಧ್ಯಾತ್ಮಪರತೆ ಇದ್ದೇ ಇರುತ್ತದೆ’
ಆಚಾರ್ಯರ ವಾಕ್ಯದ ಸ್ವಭಾವವೇ ಅಂಥಹದ್ದು. ಅನ್ಯೋದ್ದೇಶೇನ ಪ್ರಯುಕ್ತಮಪಿ ವಾಕ್ಯಂ
ಆಚಾರ್ಯವಾಕ್ಯತ್ವಾತ್ ಪ್ರತಿಪಾದಯತ್ಯೇವ ಗುಣಪೂರ್ಣಂ ಭಗವಂತಂ. ಅನ್ಯಾರ್ಥ ಆನೀಯಮಾನಪೂರ್ಣಕಲಶವತ್.
ಯಾವುದು ವಸ್ತುವಿನ ಸ್ವಭಾವವೋ ಅದು ಏನಿದ್ದರೂ ಬದಲಾಗುವುದಿಲ್ಲ. ಬೆಂಕಿಗೆ ಸುಡುವ
ಶಕ್ತಿಯಂತೆ ಪ್ರಕಾಶಿಸುವ ಶಕ್ತಿಯೂ ಸ್ವಭಾವ. ಬಿಸಿಯಾಗಬೇಕು ಎಂದು ಬೆಂಕಿಯನ್ನು
ಉಪಯೋಗಿಸಿಕೊಂಡರೂ ಬೆಳಕು ಬರುತ್ತದೆ. ಬೆಳಕಿಗಾಗಿ ಬೆಂಕಿಯನ್ನು ಉಪ-ಯೋಗಿಸಿದರೂ
ಬಿಸಿಯಾಗುತ್ತದೆ. ಯಾವುದೇ ಕಾರಣಕ್ಕೂ ತನ್ನ ಸ್ವಭಾವವನ್ನು ಬದಲಿಸಿ ಕೊಳ್ಳು-ವುದಿಲ್ಲ.

ಅದರಂತೆ ನಿರಂತರ ಭಗವಂತನನ್ನು ಚಿಂತಿಸುತ್ತಾ ಜಗತ್ತಿಗೆ ಒಳಿತನ್ನು ತಿಳಿಸುವುದು ಶ್ರೀಮದಾಚಾರ್ಯರ
ಸ್ವಭಾವ. ‘ಜ್ಞಾನಾರ್ಥಮೇವ ಯದಭೂತ್ ಅಸುದೇವ ಏಷ: ಯದ್ವಾಸುದೇವಪದಭಕ್ತಿರತ: ಸದಾsಸೌ’.
ಹಾಗಾಗಿ ಶ್ರೀಮದಾಚಾರ್ಯರು ಭಗವಂತನನ್ನು ತಿಳಿಸುವ ಗ್ರಂಥಗಳನ್ನು ಮಾಡಿದರೂ ಅದರಿಂದ
ಲೌಕಿಕವಾದ ಅನೇಕ ವಿಷಯಗಳು, ಪ್ರಯೋಜನಗಳು ಸಿಗುತ್ತವೆ. ಇದಕ್ಕೆ ಸಮಗ್ರ ಸರ್ವಮೂಲಗ್ರಂಥಗಳೇ
ಸಾಕ್ಷಿ. ಲೌಕಿಕವಾಗಿ ಒಂದು ವಾಕ್ಯವನ್ನು ಬಳಸಿದರೂ ಭಗವಂತನನ್ನು ತಿಳಿಸುತ್ತದೆ. ಈ ವಿಷಯಕ್ಕೆ ಈ
ಗ್ರಂಥವೇ ಸಾಕ್ಷಿ. ಇದನ್ನು ತಿಳಿಸುವುದಕ್ಕಾಗಿಯೇನೊ ಎಂಬಂತೆ ಆಚಾರ್ಯರು ಈ ಒಂದು ವಾಕ್ಯವನ್ನು
ಗ್ರಂಥಗಳಲ್ಲಿ ಸೇರಿಸಿಕೊಳ್ಳಿ ಎಂದು ಹೇಳಿದ್ದಿರಬಹುದು.

ಈ ಗ್ರಂಥದ ವ್ಯಾಖ್ಯಾನಗಳು

೧) ಉತ್ತರಾದಿಮಠದ ಪರಂಪರೆಯಲ್ಲಿ ಬಂದ ಸತ್ಯಪರಾಯಣತೀರ್ಥರು ಇದಕ್ಕೆ ವ್ಯಾಖ್ಯಾನವನ್ನು ಮಾಡಿದ್ದಾರೆ. (ಈ ಗ್ರಂಥದ ಕಥೆಯು ವ್ಯಾಖ್ಯಾನದಲ್ಲಿ
ಉಲ್ಲಿಖಿತವಾಗಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ಆ ಚರಿತ್ರೆಯು ಈ ವ್ಯಾಖ್ಯಾನದಲ್ಲಿ ಇಲ್ಲ.)
೨) ಸುಬ್ರಹ್ಮಣ್ಯಮಠದ ಪರಂಪರೆಯಲ್ಲಿ ಬಂದ, ವಿಷ್ಣುತೀರ್ಥರಿಂದ (ಅಂತರ್ಜಾಲದ ಪ್ರಕಾರ) 13ನೇ ಯತಿಗಳಾದ ವಿಜ್ಞಾನತೀರ್ಥರೂ ಕೂಡ ಈ ಗ್ರಂಥಕ್ಕೆ
ವ್ಯಾಖ್ಯಾನವನ್ನು ಮಾಡಿದ್ದಾರೆ.
೩) ‘ವಾದಿರಾಜಸ್ವಾಮಿಗಳೂ ಇದಕ್ಕೆ ವ್ಯಾಖ್ಯಾನ ಮಾಡಿದ್ದಾರೆ’ ಎಂದು ಪ್ರತೀತಿ ಇದೆ. ಇದು ಸಂಶೋಧನೀಯ. ಈ ವ್ಯಾಖ್ಯಾನವು ಉಪಲಬ್ಧವಿಲ್ಲ.
ಇಂತಹ ಅಮೂಲ್ಯ ಕೊಡುಗೆ ನೀಡಿದ ಶ್ರೀಮದಾಚಾರ್ಯರಿಗೆ, ವ್ಯಾಖ್ಯಾತೃಪರಂಪರೆಗೆ, ಏತದ್ಗ್ರಂಥ ಪ್ರತಿಪಾದ್ಯನಾದ ಪರಮಾತ್ಮನಿಗೆ ನಮಿಸೋಣ.

ಶ್ರೀಕೃಷ್ಣಾರ್ಪಣಮಸ್ತು

Sri Uttaradi Math Apps

Sri Uttaradi Math

Sri Uttaradi Math

VVS Matrimony

VVS Matrimony

UM Stotra

UM Stotra

Satyatma Vani

Satyatma Vani

Sandhyavandanam and Stotra (Web)

Sandhyavandanam and Stotra (Web)